Tuesday, September 29, 2009

A relationship



ಹ೦ಬಲಿಸುತಿದೆ ಮನ ನಿಮ್ಮೊಡನೆ ಮಾತನಾಡಬೇಕೆ೦ದು
ಮರುಗಿತು ಮನ ತಿಳಿದಾಗ ಅದು ಸಾಧ್ಯವಿಲ್ಲವೆ೦ದು
ನಾನಾಗಿರುವೆ ತೊಗಲುಗೊ೦ಬೆ ನಿಮ್ಮ ಕೈಯಲ್ಲಿ೦ದು
ಭಾವನೆಗಳೆ೦ಬ ದಾರಗಳನು ಹಿಡಿದು ನೀ ಅಡಿಸಬೇಡ ನನ್ನ ಎ೦ದೂ
ಹೆಚ್ಚು ಅಡಿಸಿದರೆ ಭಯವು೦ಟಾಗಿದೆ - ಎಲ್ಲಿ ಅದು ಕಡಿದು ಹೋಗುವುದು ಎ೦ದು
ಆ ಕ್ಷಣ ನೆನೆದೊಡನೆ ಹರಿಯಿತು ಕಣ್ಣ ಜಲಧಾರೆ ಇರದ ರೀತಿ ಹಿ೦ದೆ೦ದು
ಬೇಡ ಭಾ೦ಧವ್ಯಗಳ ಜೊತೆ ನಿನ್ನ ಚೆಲ್ಲಾಟ
ಆಡಿಸಬೇಡ ನೀನು ತೊಗಲುಗೊ೦ಬೆಯಾಟ
ಏ೦ದಿಗೂ ಇರಲಿ ನಮ್ಮ ನಡುವೆ ಬರಿ ಆಟ....ತು೦ಟಾಟ......

ಹೆಣ್ಣು


ಹೆಣ್ಣೆ ನಿನಗಿರುವುದು ನಾಚಿಕೆ
ಅದುವೇ ನಿನಗೆ ಶ್ರೀರಾಮ ರಕ್ಷೆ

ಹೊಗಳುವರು ಕವಿವರ್ಯರು ನಿನ್ನ ರೂಪ ಲಾವಣ್ಯ
ನಿನ್ನ ಮನಸ್ಸಿಗಿರುವುದು ಅದೆಂತಹ ತಾರುಣ್ಯ

ಪ್ರೀತಿಸುವರು ತಂದೆ-ತಾಯಿ , ನಿನ್ನ ಮಗಳಾಗಿ
ಹಸನ್ಮುಖಿಯಾಗಿರು ನೀ ಎಂದಿಗೂ ಅವರ ಮುದ್ದಿನ ಕೂಸಾಗಿ

ಅಣ್ಣ,ತಮ್ಮಂದಿರ ಮಮತೆಯ ಆಗರ ಅಕ್ಕ,ತಂಗಿ
ಪತಿಯ ಬೆನ್ನೆಲುಬಾಗಿ ನಿಲ್ಲುವ ನೀ, ಅರ್ಧಾಂಗಿ

ನಿನ್ನ ಮನಸ್ಸು ಆ ಹುಣ್ಣಿಮೆ ಚಂದಿರನಂತೆ
ನಿಷ್ಕಲ್ಮಶ ಪ್ರೀತಿ ನಿನ್ನದು ಓ ಮಾತ್ರುದೇವತೆ

ನೀ ಎಲ್ಲ ವರ್ಗದವರಿಗೂ ಸ್ನೇಹಿತೆ
ತಾಳ್ಮೆ,ಪ್ರೀತಿ,ಸ್ನೇಹಗಳಿಗೆ ಎಂದಿಗೂ ಇರುವುದಿಲ್ಲ ನಿನ್ನಲ್ಲಿ ಕೊರತೆ

Saturday, September 19, 2009

ಅಣ್ಣ-ತಂಗಿ








ನೀನಿಲ್ಲದ ಜೀವನ
ನಶ್ವರವೇನೋ
ಎನ್ನುವಂಥಾಗಿದೆಯೋ ಅಣ್ಣ

ನನಗೇಕೆ
ಬೇಕು ಬೊಂಬೆಗಳು ಆಟವಾಡಲು
ನೀನಿಲ್ಲವೆ
ನನ್ನನ್ನು ಮಗುವಂತೆ ಮುದ್ದಿಸಲು

ನನಗೇಕೆ
ಬೇಕು ಪುಸ್ತಕಗಳ ನೆಂಟಸ್ತಿಕೆ
ನೀನಲ್ಲವೇ
ನನಗೆ ಜ್ಞಾನ ಕೋಶಗಳ ಬತ್ತಳಿಕೆ

ಇರಬಹುದು
ನನಗೆ ಎಷ್ಟೋ ಜನ ಅಣ್ಣಂದಿರು ಅವರ ಪ್ರೀತಿ ಕ್ಷಣಿಕ,
ನಿನ್ನ
ಪ್ರೀತಿ ಮಾತೃ ವಾತ್ಸಲ್ಯಕ್ಕೂ ಅಧಿಕ

ಇದೋ
ದೇವರೇ ನಿನಗೆ ನನ್ನ ಧನ್ಯವಾದ
ಆಲಿಸಲು
ನೀಡಿದೆ ಭವ್ಯ ಭಾಂದವ್ಯದ ನಿನಾದ