Saturday, November 28, 2009


ಹೂ ದುಂಬಿಯಾಗಿ ನೀ ಬರಲು
ಹೂವಾದೆ ನಾನು ಮೊದಲು


ನಿನ್ನ ಪರಿಮಳವ ಪಸರಿಸಿ
ಮೊಗ್ಗಿನ ಪದರಗಳ ಬಿಡಿಸಿ
ಹೂವಾಗಿ ನಿಂತೆ
ಪರಗಸ್ಪರ್ಶಕೆ ನಾ ಕಾದೆ
ಎಲ್ಲಿ ಹೋದೆ ನೀನು
ಸ್ಪರ್ಶಿಸದೆ ನನ್ನ ಮನವನ್ನು

ಹೂ ದುಂಬಿಯಾಗಿ ನೀ ಬರಲು
ಹೂವಾದೆ ನಾನು ಮೊದಲು



ಅಲೆಗಳಾಗಿರಲು ನಾನು
ಚಂದಿರನಾಗಿ ಬರುವೆ ಎಂದು ನಾ ಕಾದೆ
ಆದರೇನು ಸುಖ ಬಂತು
ನೀನಾದೆ ಅಮಾವಾಸ್ಯೆ ನನ್ನ ಬಾಳಿಗಂತೂ

ಹೂ ದುಂಬಿಯಾಗಿ ನೀ ಬರಲು
ಹೂವಾದೆ ನಾನು ಮೊದಲು


ನವಿಲಾಗಿ ನರ್ತಿಸಲು ನಾನು
ಕಾರ್ಮೊದಕ್ಕಾಗಿ ಕಾದು ಕುಳಿತೆ
ನೀ ಬಂದು ಸೂರ್ಯನಂತೆ
ಚದುರಿಸಿದೆ ಅವುಗಳನು ಅದರಂತೆ

ಹೂ ದುಂಬಿಯಾಗಿ ನೀ ಬರಲು
ಹೂವಾದೆ ನಾನು ಮೊದಲು