ಹೂ ದುಂಬಿಯಾಗಿ ನೀ ಬರಲುಹೂವಾದೆ ನಾನು ಮೊದಲುನಿನ್ನ ಪರಿಮಳವ ಪಸರಿಸಿಮೊಗ್ಗಿನ ಪದರಗಳ ಬಿಡಿಸಿಹೂವಾಗಿ ನಿಂತೆಪರಗಸ್ಪರ್ಶಕೆ ನಾ ಕಾದೆಎಲ್ಲಿ ಹೋದೆ ನೀನುಸ್ಪರ್ಶಿಸದೆ ಈ ನನ್ನ ಮನವನ್ನುಹೂ ದುಂಬಿಯಾಗಿ ನೀ ಬರಲುಹೂವಾದೆ ನಾನು ಮೊದಲುಅಲೆಗಳಾಗಿರಲು ನಾನುಚಂದಿರನಾಗಿ ಬರುವೆ ಎಂದು ನಾ ಕಾದೆಆದರೇನು ಸುಖ ಬಂತುನೀನಾದೆ ಅಮಾವಾಸ್ಯೆ ನನ್ನ ಬಾಳಿಗಂತೂಹೂ ದುಂಬಿಯಾಗಿ ನೀ ಬರಲುಹೂವಾದೆ ನಾನು ಮೊದಲುನವಿಲಾಗಿ ನರ್ತಿಸಲು ನಾನುಕಾರ್ಮೊದಕ್ಕಾಗಿ ಕಾದು ಕುಳಿತೆನೀ ಬಂದು ಸೂರ್ಯನಂತೆಚದುರಿಸಿದೆ ಅವುಗಳನು ಅದರಂತೆಹೂ ದುಂಬಿಯಾಗಿ ನೀ ಬರಲುಹೂವಾದೆ ನಾನು ಮೊದಲು
This sounds really superb. ಬಹಳ ದಿನದ ಮೇಲೆ ಕವನ ಬರೆದಿದ್ದೀರ.. ಅಭಿನಂದನೆಗಳು.
ReplyDelete"ನಿನ್ನ ಪರಿಮಳವ ಪಸರಿಸಿ
ಮೊಗ್ಗಿನ ಪದರಗಳ ಬಿಡಿಸಿ
ಹೂವಾಗಿ ನಿಂತೆ
ಪರಗಸ್ಪರ್ಶಕೆ ನಾ ಕಾದೆ
ಎಲ್ಲಿ ಹೋದೆ ನೀನು
ಸ್ಪರ್ಶಿಸದೆ ಈ ನನ್ನ ಮನವನ್ನು.."
..ಈ ಸಾಲುಗಳಲ್ಲಿ ರೂಪಕ, ಹೋಲಿಕೆ ತುಂಬ ಚೆನ್ನಾಗಿದೆ. "ಹೂ ದುಂಬಿಯಾಗಿ ನೀ ಬರಲು.." ಅನ್ನೊ ಸಾಲು "ಮಿಂಚಾಗಿ ನೀನು ಬರಲು.." ಅನ್ನೊ ಹಾಡನ್ನ ಜ್ಣಾಪಿಸೊ ಥರ ಇದೆ..ಪಕ್ಕದಲ್ಲಿ ಇರೊ photo ಕಲ್ಪನೆಗೆ ಕನ್ನಡಿ ಇಟ್ಟಂತಿದೆ..
The way of expression is very good!
after long gap Raksha you have written poem.
ReplyDeletenice one.
But why sad feelings "ಎಲ್ಲಿ ಹೋದೆ ನೀನು ಸ್ಪರ್ಶಿಸದೆ", "ಎಲ್ಲಿ ಹೋದೆ ನೀನು ಸ್ಪರ್ಶಿಸದೆ","ನೀ ಬಂದು ಸೂರ್ಯನಂತೆ ಚದುರಿಸಿದೆ ಅವುಗಳನು"
what is wrong?
@pradeep,sitaram.....thanks for ur comments....keep giving me comments like this.....
ReplyDeleteನನ್ನ ಮನದಾಳದಲ್ಲಿ ಬದುಕುತ್ತಿರುವ ನಿನ್ನ ರೂಪವ ನೋಡುತ್ತಾ
ReplyDeleteನನ್ನ ಕಂಗಳ ಮುಂದೆ ನಿನ್ನ ಚಿತ್ರವನ್ನು ಬಿಡಿಸುತ್ತಾ
ನಿನ್ನ ಜೊತೆ ಕಳೆದ ಆ ಮಧುರವಾದ ಕ್ಷಣಗಳ ನೆನೆಯುತಾ
ಆ ನೆನಪುಗಳನ್ನು ಕವಿತೆಗಳಾಗಿ ಬರೆಯುತ್ತಾ
ಅನುಕ್ಷಣವು ನೀನಾಗಿಯೇ ನಾ ಬಾಳುತ್ತಿರುವೆ....!!
@ Gururaj......
ReplyDeleteNimma bhavanegalige needida padagala jodane tumba sogasagide.....tumba dhanyavadagalu ee nimma kavanakkagi.....
ಧನ್ಯವಾದಗಳು ರಕ್ಷಾ...!!
Deleteಸ್ಟೇಜ್ ಮೇಲೆ ಹುಡಗಿಯರ ಕೊಲಾಟಾ ನೆಡದೈತಿ
ReplyDeleteಅಲ್ಲಿ ಇರುವ ನನ್ನ ಹುಡಗಿ ಮೇಲೆ ನನ್ನ ಕಣ್ಣ ಐತಿ
ಹತ್ತಿರಾ ಹೋಗಿ ಮಾತಾಡಿಸಬೇಕು ಅಂತೀನಿ
ಏನ ಮಾಡಲಿ ನನ್ನ ಹುಡಗಿ ಕೈಲ್ಲಿ ಕೊಲ ಐತಿ....!!!!
@gururaj....
ReplyDeleteಹ ಹಾ ....ಚೆನ್ನಾಗಿದೆ