
ಓ ನನ್ನ ಕವನ,
ಮರೆತಿದ್ದೆನಲ್ಲ ನಿನ್ನ,
ಕಾಲ ಚಕ್ರದಲ್ಲಿ ಓಡುತಿರುವ ಈ ನನ್ನ ದೈನಂದಿನ ಜೀವನ,
ನಿರಾಸೆ,ನಿರುತ್ಹ್ಸಾಹಗಳು ಜ್ವಾಲಾಮುಖಿಯಂತೆ ಒಡೆಯುವ ಮುನ್ನ,
ಮರಳಿಬಂದೆಯಾ!!!!
ತೋಡಿಕೊಳ್ಳಲು ನನ್ನ ದುಗುಡ,ದುಮ್ಮಾನಗಳನ್ನ
ನೀನದುವೆ ನನ್ನ ಅಂತಃಕರಣದ ಸ್ನೇಹಿತೆ,
ನೀನಲ್ಲವೇ ನನ್ನ ಭಾವನೆಗಳ ಅಕ್ಷಯಪಾತ್ರೆ,
ನಿನ್ನ್ನೊಡನಾಟವಿಲ್ಲದ ಮನಸ್ಸು,ವ್ಯರ್ಥ ಯೋಚನೆಗಳ ಸಂತೆ,
ನೀನಿದ್ದರೆ ಇರುವುದಿಲ್ಲ ನನಗೆ ಒಂಟಿತನದ ಚಿಂತೆ