Friday, August 17, 2012




ತಿಳಿದು ತಿಳಿದು ಮಾಡಿದ ತಪ್ಪಿಗೆ

ಇರುವುದೇ ಪ್ರಾಯಶ್ಚಿತ್ತ?




ನಡೆದು ನಡೆದು ಬಂದ ದಾರಿ ಯಲಿ

ಸಾಗಲು ಇರುವುದೇ ಆತಂಕ?






ಬಳಲಿ ಬಳಲಿ ಬೆಂಡಾ ಜೀವನದಲ್ಲಿ

ಮೂಡುವುದೇ ಭರವಸೆಯ ದೀಪ?






ಬದುಕಿನಲಿ ಸೋತು ಸೋತು ರಾಜಿಯಾದವನಿಗೆ

ತಿಳಿಯದೇ ಗೆಲುವಿನ ತೂಕ?






ಮುಚ್ಚಿಟ್ಟು ಬಚ್ಚಿಟ್ಟ ಪ್ರೀತಿ

ನೀಡಬಲ್ಲುದೇ ಕಂಕಣಭಾಗ್ಯದ ಸುಖ?




No comments:

Post a Comment