Saturday, December 26, 2009


ಕ್ಷಣ ಕ್ಷಣ .......ಮನದ ಮಿಡಿತ.....
ನಿನಗೇಕೆ ಕೇಳುತಿಲ್ಲ ನನ್ನ ಎದೆ ಬಡಿತ...
ಭಾವನೆಗಳ ಅಲೆಗಳ ಮೇಲೆ ದೋಣಿ ಸಾಗಿಸುವ ನನ್ನ ನಾವಿಕ
ನನ್ನ ಸ್ವರಗಳಿಗೆ ದ್ವನಿ ನೀಡುವ ನನ್ನ ಗಾಯಕ
ನಿನ್ನ ಸ್ವರಗಳಿಗೆ ನನ್ನಲ್ಲಿ ಅಡಗಿದ್ದ ವೀಣೆಯ ಮೀಟುವ ತವಕ....
ಹೇಗಿರುವೆ ನನ್ನ ಬಾಳಿನ ನಾಯಕ?????

ದಾರಿಯ ತೋರಿಸೋ ದೇವ
ನಿನ್ನನ್ನೇ ನಂಬಿಹೆ ನಾನು
ದಾರಿ ತೋಚದೆ ದಿಕ್ಕಾಪಾಲಾಗಿ,ದಾರಿ ತೋಚದೆ ದಿಕ್ಕಾಪಾಲಾಗಿ
ಓಡುತಿರುವೆ ನಾನು,ದಾರಿಯ ತೋರಿಸೋ ದೇವ.............


ಕೈ ಹಿಡಿದು ನಡೆಸೆಂದು ನಾ ಬೇಡೆನು
ಕೈ ಬೆರಳ ತೋರಿಸಿ ಮುನ್ನಡೆಸೋ ದೇವ
ನಿನ್ನನ್ನೇ ನಂಬಿಹೆ ,ದಾರಿಯ ತೋರಿಸೋ ದೇವ...........


ಮನವೆಲ್ಲ ಮರುಭೂಮಿಯಾಗಿ ಗಿಡನೆಡಲು
ನೀರಿಲ್ಲವಾಗಿದೆ
ಮಳೆಯ ಸುರಿಸೆಂದು ನಾ ಕೇಳೆನು
ಮರೀಚಿಕೆಯಾದರು ಮೂಡಿಸೋ ದೇವ
ನಿನ್ನನ್ನೇ ನಂಬಿಹೆ,ದಾರಿಯ ತೋರಿಸೋ ದೇವ...........

Tuesday, December 1, 2009


ನಾ ಮಾತಾಡದೆ ಮಾತಾಡದೆ,ನೀ ನನ್ನ ಮಾತಾಡಿಸಿದೆ
ನನ್ನವನಲ್ಲದೆಯೇ, ನೀನಾಗಿ ನನಗೆ ಪರಿಚಯವಾದೆ

ಮೌನ ಬಂಗಾರ ನಿಜ,ಆದರೆ ಮಾತುಗಳಲ್ಲವೇ ನಮಗಿದ್ದ ಬಂಗಾರ
ಅವಲ್ಲವೇ ಮಾಡಿದ್ದವು ನಮ್ಮ ಭಾಂದವ್ಯಕ್ಕೆ ಅಲಂಕಾರ

ನಿನ್ನ ಮಾತಿನ ಒಳಾರ್ಥ ತಿಳಿಯುವ ಬಗೆ ನನಗೆ ತಿಳಿದಿತ್ತು
ಅದೇ ಅಲ್ಲವೇ ಪ್ರೀತಿಯಲ್ಲಿರುವ ಗಮ್ಮತ್ತು

ಈಗೇಕೆ ನಮ್ಮ ನಡುವೆ ಈ ಶೀತಲ ಸಮರ
ಒಮ್ಮೆ ನೀ ಬಂದು ವಿಚಾರಿಸಿದರೆ ,ಆಗುವುದಲ್ಲವೆ ನನ್ನ ಮನಸು ಸುಮಧುರ