ಹ೦ಬಲಿಸುತಿದೆ ಮನ ನಿಮ್ಮೊಡನೆ ಮಾತನಾಡಬೇಕೆ೦ದು ಮರುಗಿತು ಮನ ತಿಳಿದಾಗ ಅದು ಸಾಧ್ಯವಿಲ್ಲವೆ೦ದು ನಾನಾಗಿರುವೆ ತೊಗಲುಗೊ೦ಬೆ ನಿಮ್ಮ ಕೈಯಲ್ಲಿ೦ದು ಭಾವನೆಗಳೆ೦ಬ ದಾರಗಳನು ಹಿಡಿದು ನೀ ಅಡಿಸಬೇಡ ನನ್ನ ಎ೦ದೂ ಹೆಚ್ಚು ಅಡಿಸಿದರೆ ಭಯವು೦ಟಾಗಿದೆ - ಎಲ್ಲಿ ಅದು ಕಡಿದು ಹೋಗುವುದು ಎ೦ದು ಆ ಕ್ಷಣ ನೆನೆದೊಡನೆ ಹರಿಯಿತು ಕಣ್ಣ ಜಲಧಾರೆ ಇರದ ರೀತಿ ಹಿ೦ದೆ೦ದು ಬೇಡ ಭಾ೦ಧವ್ಯಗಳ ಜೊತೆ ನಿನ್ನ ಚೆಲ್ಲಾಟ ಆಡಿಸಬೇಡ ನೀನು ತೊಗಲುಗೊ೦ಬೆಯಾಟ ಏ೦ದಿಗೂ ಇರಲಿ ನಮ್ಮ ನಡುವೆ ಬರಿ ಆಟ....ತು೦ಟಾಟ......